ಬೆಂಗಳೂರು, ಡಿಸೆಂಬರ್ 11 : ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಡಿವಾಳ ಮಾರುಕಟ್ಟೆ ಬಳಿಯ ಅಂಡರ್ ಪಾಸ್ ಸದ್ಯದಲ್ಲೇ ಹೊಸ ರೂಪ ಪಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಂಡರ್ ಪಾಸ್ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲಿಯೇ ಹೊಸ ಲುಕ್ ಪಡೆದುಕೊಳ್ಳಲಿದೆ. ವಿಪರೀತ ವಾಹನ ದಟ್ಟಣೆ ಇರುವ ಈ ಅಂಡರ್ ಪಾಸ್ ಇತ್ತೀಚಿನ ದಿನಗಳಲ್ಲಿ ದುರಸ್ಥಿಗೆ ತಲುಪಿತ್ತು. ಜತೆಗೆ ಕೆಲವು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಅಂಡರ್ ಪಾಸ್ ಒಳಗೆ ನೀರು ಸಮಸ್ಯೆಯೂ ಉಂಟಾಗಿತ್ತು. ಬೆಂಗಳೂರಿನಲ್ಲಿರುವ ಸಾಕಷ್ಟು ಅಂಡರ್ ಪಾಸ್ ಗಳು ಜೀವ ಕಳೆದುಕೊಂಡಿದೆ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಸಂದರ್ಭದಲ್ಲಿ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟಲು ಅರ್ಧದಿಂದ ಒಂದು ಗಂಟೆಯವರೆಗೆ ನಿಲ್ಲಬೇಕಾಗುತ್ತದೆ.ಇಂತಹ ಸಂದರ್ಭದಲ್ಲಿ ಅಂಡರ್ ಪಾಸ್ ಬಳಕೆ ಮಾಡಲು ಮುಂದಾದರೆ ನಗರದಲ್ಲಿರುವ ಸಾಕಷ್ಟು ಅಂಡರ್ ಪಾಸ್ ಗಳಿಗೆ ಬೀಗ ಹಾಕಲಾಗಿದೆ. ಇನ್ನು ಕೆಲವು ಅಂಡರ್ ಪಾಸ್ ಗಳ ಸ್ಥತಿ ನೋಡಿದರೆ ಅದರೊಳಗೆ ಹೋಗುವುದು ಹಾಗಿರಲಿ ನೋಡಲು ಕೂಡ ಸಾದ್ಯವಿಲ್ಲ, ಅಂತಹ ಪರಿಸ್ಥಿತಿಯಲ್ಲಿದೆ. ಈಗ ಕಳೆದ ಒಂದು ವರ್ಷದಿಂದ ಬಿಬಿಎಂಪಿಯು ನಗರದಲ್ಲಿರುವ ಎಲ್ಲ ಅಂಡರ್ ಪಾಸ್ ಗಳನ್ನು ಸರಿಪಡಿಸಲಾಗುತ್ತಿದೆ.
After seven years long time, underpass at Madiwala market in Hosur road will get new facelift as BBMP planning Rs.58 lakhs including road repair, divider installation and underpass wall construction works.